Saturday 3 December 2011

ಮಡೆ ಸ್ನಾನ

"ಮಂಡೆ ಬಿಸಿ ಬಿಸಿಯಾಗುವ ವಾತಾವರಣವೇ ನಿತ್ಯ ಸೃಸ್ಟಿಯಾಗುತ್ತಿರುವಾಗ ಯಾರಿಗೇಕೆ ಎಂದು ಪ್ರಶ್ನಿಸುವ ಮೂಲಭೂತವಾದದ ಮಾತೇ ಮನಸಿಗೆ ಘಾಸಿ ಮೂಡಿಸುತ್ತಿದೆ.ನಿತ್ಯ ಜೀವನದಲ್ಲಿನ ಹತ್ತಾರು ವೇಷಗಳು,ನೂರಾರು ಸಂಪ್ರದಾಯ,ನಂಬಿಕೆ ಎಂದೆಲ್ಲಾ ಬಿಂಬಿಸಿ ಸಮಾಜವನ್ನು ಅಜ್ಙಾನ,ಅಂಧಕಾರ,ಮೌಡ್ಯತೆಯತ್ತ ಮತ್ತಷ್ಟು ಕೊಂಡೊಯ್ಯುವಂತೆ ಆ ಮೂಲಕ ಪಟ್ಟ ಭದ್ರರ ಸಿದ್ಧಾಂತ,ತತ್ವಗಳ ಬೇರುಗಳು ಗಟ್ಟಿಯಾಗುವಂತೆ ಮಾಡುತ್ತಿರುವ ವ್ಯವಸ್ಥಿತ ಹುನ್ನಾರುಗಳನ್ನು ನೋಡಿಯೂ ನೋಡದವರಂತೆ ಕಣ್ಮುಚ್ಚಿಕುಳಿತು ಕೊಳ್ಳಬೇಕೆ?ಇನ್ನೂ ಬಹಳ ಕಾಲ ಇದೇ ವ್ಯವಸ್ಥೆ ಇರುವುದೆಂಬ ಭರವಸೆ ಬೇಡ.ವೈಚಾರಿಕ ತಿಳುವಳಿಕೆ,ಸಂಶೋಧನಾ ಮನೋಭಾವ,ವೈಜ್ಞಾನಿಕತೆಗಳೆಲ್ಲದರ ಪರಿಣಾಮ ಕಟ್ಟಕಡೆಯ ಮನುಷ್ಯನೂ ಜಾಗೃತನಾಗುವಂತೆ ಆಗಿದೆ.ಕಾಲವೂ ಬದಲಾಗುತ್ತಿದೆ.ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳಬೇಕಿದ್ದ ವ್ಯವಸ್ಥೆಯ ಅಟ್ಟಹಾಸಕ್ಕೆ ಕೊನೆಮೊಳೆ ಹೊಡೆಯುವ ಕಾಲ ಬಂದಿದೆ"
('ಕೆಲವರಿಗೇಕೆ ಮಡೆ ಸ್ನಾನದ ಮಂಡೆ ಬಿಸಿ' ಎಂದು ಪ್ರಶ್ನಿಸಿ ಬರಹಗಾರರೋರ್ವರು ಕನ್ನಡ ಬ್ಲಾಗಿನಲ್ಲಿ ಬಿತ್ತರಿಸಿದ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು.)

1 comment:

  1. ನಂಬಿಕೆ ಇದ್ದರೆ ವೈದ್ಯರು ನೀರಿನ
    ಇಂಜಕ್ಷನ್ ಕೊಟ್ಟರೂ ರೋಗ ವಾಸಿ,
    ಎನ್ನುವಂತೆ ಇಂತಹ ಆಚರಣೆಗಳಿಂದ ಮಾನಸಿಕ ನೆಮ್ಮದಿ ದೊರೆಯುವುದಾದರೆ ಮಾಡಿಕೊಳ್ಳಲಿ
    ಅಂತ ಬಿಡುವುದೇ ಇಲ್ಲ!

    ಯಾರಿಗೋ ಪೇಪರ್ರು ಟೀವಿಗಳಲ್ಲಿ
    ಮಿಂಚಲು ಸದಾ ಯಾವುದಾದರೂ ಪ್ರಕರಣ ಇರಲೇ ಬೇಕು. ಯಾವುದೂ ಸಿಗದಿದ್ದರೆ ಗಣಪತಿ ಹಾಲು ಕುಡಿದರೂ ರೆಡಿ, ಸಾಯಿ ಬಾಬಾ ಫೋಟೋದಲ್ಲಿ
    ಕಣ್ಣು ಬಿಟ್ಟರೂ ಆದೀತು!

    ReplyDelete