ಜಾತಿ,ಅಸಮಾನತೆ,ಶೋಷಣೆ,ಪುರೋಹಿತಶಾಯಿಯಂಥ ಕಮಟು ಕಂಧಾಚಾರಗಳಿಗೆ
ಸೆಡ್ಡು ಹೊಡೆದು ವಿಶ್ವಮಾನವತೆಯ ಸಂದೇಶ ಸಾರಿದ್ದ ಸಾಹಿತ್ಯ ದಿಗ್ಗಜ,ರಸ ಋಷಿ,ಮಾನವತಾವಾದಿ ಕುವೆಂಪು ಅವರನ್ನು ತಮ್ಮ ಜಾತಿ ಕುಲ ಬಾಂಧವನೆಂದು ಸಮಾವೇಷದಲ್ಲಿ
ಮೆರೆದಾಡಿದ ನಮ್ಮ ಒಕ್ಕಲಿಗ ಬಂಧುಗಳ ಮನೋಸ್ಥಿತಿಯನ್ನು ನೋಡಿ ಮರುಕುಂಟಾಗುವುದು.
‘ಗುಡಿ,ಚರ್ಚು,ಮಸೀದಿಗಳನ್ನು
ಬಿಟ್ಟು ಹೊರಬನ್ನಿ...’ಎಂದು ಕರೆ
ನೀಡಿ ಮನುಜ ಮತವೇ ವಿಶ್ವಮತವೆಂದು ಸಾರಿ ಹೇಳಿದ ಕುವೆಂಪು ಅವರನ್ನು ತಮ್ಮ ಜಾತಿ ನೆಲೆಯಲ್ಲಿ
ಅನಾವರಣಗೊಳಿಸಿಕೊಂಡು ಅವರ ಶ್ರೀಮಂತ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಅಪಮಾನ ಮಾಡಿರುವುದು ಖೇದಕರ
ಸಂಗತಿಯಾಗಿದೆ. ಯಾವ
ಗೊಡ್ಡು ವ್ಯವಸ್ಥೆಯನ್ನು ಕುವೆಂಪು ಅವರು ವಿರೋದಿಸಿ ಅದರಂತೆ ಬಾಳಿದರೋ ಅದೇ ವ್ಯವಸ್ಥೆಯನ್ನು ವೈಭವೀಕರಿಸಿ ಅವರ ಮಹಾನ್ ವ್ಯಕ್ತಿತ್ವಕ್ಕೆ ಅಕ್ಷರಶಃ ಮಸಿ ಬಳಿಯುವ ಮತ್ತು ಅವರನ್ನು ಒಕ್ಕಲಿಗ
ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನೋಭಾವದ ದರ್ಶನವೂ ಆಯಿತು.ಜ್ಞಾನ ಮತ್ತು ಸ್ವಾಭಿಮಾನಗಳೇ ತಮ್ಮ
ತಮ್ಮ ಏಳಿಗೆಗೆ ಊರುಗೋಲಾಗಬೇಕು. ಧೀಮಂತ ವ್ಯಕ್ತಿಗಳ ಭಾವ ಚಿತ್ರ,ಹೆಸರುಗಳನ್ನು ಹೇಳಿಕೊಂಡು ಬೇಳೆ
ಬೇಯಿಸಿಕೊಳ್ಳುವ ಜಾಣತನ ಬೇಡ.ಪುರೋಹಿತಶಾಯಿಯನ್ನು ವೈಭವೀಕರಿಸಿದಷ್ಟೂ ಅಸಮಾನತೆ ಮತ್ತು ಮೌಢ್ಯತೆಗಳ
ರುದ್ರ ನರ್ತನವಾಗುವುದೆಂಬ ತಿಳುವಳಿಕೆ ನಮ್ಮ ಬಂಧುಗಳಲ್ಲಿ ಮೂಡಿ ಬರಲಿ.
= ಬನವಾಸಿ ಸೋಮಶೇಖರ್.
05-06-2012
ಇದನ್ನು ಸ್ವಲ್ಪ ವಿಸ್ತರಿಸಿ ಬರೆಯಲು ಕೋರಿಕೆ. ಲೇಖನ ಆಶಯ ಚೆನ್ನಾಗಿದೆ.
ReplyDeleteರವಿ ಸರ್.ಎಲ್ಲಿದ್ದೀರಿ? ಬೇಗನೇ ನಮ್ಮ ಕನ್ನಡ ಬ್ಲಾಗಿಗೆ ಬಂದು ಬಿಡಿ.ನೀವಿಲ್ಲದೇ ಗುರಿ ಇಲ್ಲದಾಗಿದೆ.ಕುವೆಂಪು ಬಗ್ಗೆ ತಕ್ಷಣಕ್ಕೆ ಮನಸಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರರೂಪ ನೀಡಿದ್ದೆ.ತಮ್ಮ ಹಾರೈಕೆ ಸದಾ ಇರಲಿ.
Deleteವಿಶ್ವ ಮಾನವ ಪರಿಕಲ್ಪನೆಯನ್ನು ಜಾಗೃತಗೊಳಿಸಲು ಬದುಕೆಲ್ಲ ಹೆಣಗಾಡಿದ ರಸಋಷಿಯನ್ನು ಸಂಕುಚಿತ ಭಾವದಿಂದ ನೋಡುವುದನ್ನು ಬಿಟ್ಟು ಅವರ ಕೃತಿಗಳ ಭಾವ ರೂಢಿತನ ಬೆಳೆಸಿಕೊಂಡರೆ ಒಳ್ಳೆಯದು.
ReplyDeleteಬನವಾಸಿ ಗೆಳೆಯ ಒಳ್ಳೆಯ ಬರಹಕ್ಕೆ ಧನ್ಯವಾದಗಳು.
ನನ್ನ ಬ್ಲಾಗಿಗೂ ಸ್ವಾಗತ.
ತುಂಬಾ ಧನ್ಯವಾದಗಳು ಬದ್ರಿನಾಥಜೀ,ನನ್ನ ಬ್ಲಾಗು,ಪ್ರೋಫೈಲಿಗೆ ಆಗಾಗ ಭೇಟಿ ನೀಡುತ್ತಾ ನಮ್ಮನ್ನು ಹುರಿದುಂಬಿಸುವ ನಿಮ್ಮ ಪರಿ ಅನನ್ಯ.ನನ್ನ ಭಾವನೆಗಳಿಗೆ ಬೆಳಕು ನೀಡಿದಿರಿ.ಖಂಡಿತಾ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತೇನೆ.ಧನ್ಯವಾದಗಳು
Deleteಒಂದು ವ್ಯಕ್ತಿತ್ವದ ದುರುಪಯೋಗ ಮಾಡಿಕೊಳ್ಳುವ, ಅದನ್ನು ಸ್ವಾರ್ಥ ಸಾಧನೆಗೆ ಉಪಯೋಗಿಸಿಕೊಳ್ಳುವ ಪರಿ ಈಗ ಸಾಮಾನ್ಯ. ಪ್ರಸಕ್ತ ಸನ್ನಿವೇಶಕ್ಕೆ ತಕ್ಕ ಮಾತು. ಮಾತೆ ಭಂಡವಾಳವಾಗಿರುವ ಈ ವರ್ತಮಾನ ಸಮಾಜದಲ್ಲಿ, ಆಡಿದ ಮಾತಿಗೆ ಬೆಲೆ ಇಲ್ಲದೆ ಜೀವನ ಒಂದು ಶೋಕಿಯಾಗಿದೆ. ಸಹೃದಯಿಗಳು ಈ ತೋರಿಕೆಯ ಸಮಾಜದಲ್ಲಿ ಎಲೆ ಮರೆಯ ಕಾಯಾಗೆ ಉಳಿಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಒಳ್ಳೆಯ ವಿಚಾರಧಾರೆ ಸರ್.. ನಮನಗಳು :)
ReplyDeleteಅತ್ಯಂತ ಮಾರ್ಮಿಕ ನುಡಿತೋರಣ ನಿಮ್ಮದು.ಓದಿ ಹಿತಾನುಭವ ಪಡೆದೆ.ಧನ್ಯವಾದಗಳು.
Delete