Friday, 3 January 2014

ಈಗ ನೀವು ಯಾರನ್ನು ಅಣಕ ಮಾಡಿದ್ದು?


" ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಹರಿಬಿಡುವುದೇ ಬೌದ್ಧಿಕತೆಯ ಶ್ರೇಷ್ಠ ಲಕ್ಷಣ.ಅದು ಇದೆ ಎಂದು ಹೇಗೆ ಬೇಕಾದರೂ,ಏನು ಬೇಕಾದರೂ ಮಾತನಾಡಿ ದೋಣಿ ದಾಟಿಯಾದ ಮೇಲೆ 'ಆಡಿದ್ದೊಂದು ಮಾಡಿದ್ದೊಂದು' ಎನ್ನುವ ಹಾಗೆ ನಡೆದುಕೊಂಡರೆ ಇದೆಂಥ ಮೌಲ್ಯವಾದೀತು? ಆಡುವುದು ಸುಲಭ,ಆಡಿದಂತೆಯೇ ನಡೆಯುವುದು ಕಷ್ಟ ಕಷ್ಟ ಎನ್ನುವ ಕಟು ಸತ್ಯದ ಪರಿಜ್ಞಾನ ಆಡುವ ಮೊದಲೇ ಮೂಡಿರಬೇಕು.ಆಡಿ ನಂತರ ನಾನು ಹಾಗೆ ಆಡಿಲ್ಲ,ಹೀಗೆ ಆಡಿದ್ದೆ ಎಂಬ ಮತ್ತದೇ ಹುಸಿ ಸಮರ್ಥನೆಯ ಆಟ ಆಡಿದರೆ ಅದು ದಿಬ್ಯವಾದೀತೆ? ಮೊದಲು ಎನಗಿಂತ ಕಿರಿಯರಿಲ್ಲ,ನಿಮಗಿಂತ ಹಿರಿಯರಿಲ್ಲ ಎಂದಿರಿ.ಈಗ? ಈಗ ನೀವು ಯಾರನ್ನು ಅಣಕ ಮಾಡಿದ್ದು?

1 comment:

  1. ಕೆಲವರ ಕೀಳುಬುದ್ದೀಯೇ ಅಂತು, ಏರಿದ ಏಣಿಯನೇ ಉರುವಲಾಗಿಸಿ ಅನ್ನ ಬೇಯಿಸಿಕೊಳ್ಳುವ ಸ್ವಾರ್ಥಪರರು.
    ಪುಟ್ಟದಾದರೂ ಹಂಗಿಸುವ ಮನಸ್ಸುಗಳಿಗೆ ಛಾಟೀ ಎಟಿನಂತಹ ಬರಹ.

    ReplyDelete