ಸುಜ್ಞಾನವಂತರಾದ ಶ್ರೀಯುತ ಪ್ರತಾಪ್ ಸಿಂಹ ರವರಿಗೆ ಸಪ್ರೇಮ ನಮಸ್ಕಾರ.
ನಿಮ್ಮ ಈ ದಿನದ ಕನ್ನಡ ಪ್ರಭದಲ್ಲಿನ " ದಲಿತರ ಮತಗಳು ಮಾರಾಟಕ್ಕಿಲ್ಲ ಎಂದ ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" ಲೇಖನವನ್ನು ಓದಿ ಅತ್ಯಾನಂದವಾಯಿತು.ಮೊದಲಿನಿಂದಲೂ ನಿಮ್ಮ ಬರಹಗಳನ್ನೂ ಓದಿ ಆಸ್ವಾದಿಸಿರುವೆ.ಸಮಾಜಮುಖಿಯಾಗಿದ್ದು ಬದ್ಧತೆ ಹೊಂದಿ ಬರೆದ ಲೇಖನದಲ್ಲಿ ಎಲ್ಲಿಯೂ ಯಾವ ಪೂರ್ವಾಗ್ರಹಗಳೂ ಕಾಣ ಬರಲಿಲ್ಲ.ಈ ಸಾರ್ವಭೌಮ ಪರಮಾಧಿಕಾರದ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಂದು ವರ್ಗಕ್ಕೆ ನೀವು ಕನ್ನಡಿ ಹಿಡಿದಿದ್ದೀರಿ.ಜೊತೆಗೆ ಹೋರಾಟಗಾರನಿರಬೇಕಾದ ಉದ್ದೇಶವೇನು ಎಂಬುದನ್ನು ಸರ್ವರಿಗೂ ಮನಗಾಣಿಸಿದ್ದೀರಿ. 70 ರ ದಶಕದ ನಂತರ ಕನ್ನಡ ನಾಡಿನಲ್ಲಿ ಉದಯಿಸಿ ಹೋರಾಟದ ಕಿಚ್ಚು ಹಚ್ಚಿದ್ದ ದಲಿತ ಚಳುವಳಿ,ಸ್ವಾರ್ಥ-ಲಾಲಸೆಗಳಿಗೊಳಗಾಗಿ ದಿಕ್ಕೆಟ್ಟು ಹೋದ ಬಗ್ಗೆಯೂ,ಮುಂದೆ ಈ ಜನಾಂಗ ಒಗ್ಗೂಡಬೇಕಾದ ಅವಶ್ಯಕತೆಯ ಬಗ್ಗೆಯೂ ನಿಮ್ಮ ಲೇಖನಿ ಬೆಳಕು ಚೆಲ್ಲಲೆಂದು ಆಶಿಸುತ್ತೇನೆ.ನಿಮ್ಮಲ್ಲಿರುವ ಹರಿತವಾದ ಲೇಖನಿಯು ಹೀಗೆ ಸರ್ವರನ್ನೂ ತಲುಪುವ ಮಾನದಂಡವಾಗಿ ನಮ್ಮನ್ನು ಪ್ರೇರಿಸಲಿ ಎಂದಷ್ಟೇ ಹೇಳಬಲ್ಲೆ.
ಪ್ರೀತಿಯಿಂದ,
ತಮ್ಮ ಅಭಿಮಾನಿ.
ಬನವಾಸಿ ಸೋಮಶೇಖರ್.
ಈ ಲೇಖನವನ್ನು ನಾನೂ ಓದಿದ್ದೆ. ಜನಾಂಗದ ಕಣ್ಣು ತೆರೆಸುವ ಲೇಖನ.
ReplyDelete