" ಯಾವುದೇ ಪಕ್ಷಮೋಹವಿಲ್ಲ.ಪ್ರಜಾಪ್ರಭುತ್ವ,ಸಮಾನತೆ,ಜಾತ್ಯಾತೀತ ತತ್ವಗಳಲ್ಲಿ ನಂಬಿಕೆ.ಪ್ರತಿಯೊಬ್ಬ ದೇಶವಾಸಿಗೂ ರಾಜಕೀಯ ಬದ್ಧತೆ,ಇಚ್ಛಾಶಕ್ತಿ ಇರಲೇಬೇಕು.ಪ್ರಜಾಪ್ರಭುತ್ವಕ್ಕೆ ನಾಗರೀಕನೇ ಬೇರು,ಉಸಿರು,ಜೀವಾಳ.ಸಾರ್ವಭೌಮ ಪರಮಾಧಿಕಾರ ಹೊಂದಿರುವ ಪ್ರತಿಯೊಬ್ಬ ಪೌರನೂ ರಾಜನೀತಿಯ ವಾರಸುದಾರ.ಜವಾಬ್ದಾರಿಯಿಂದ ನುಣುಚಿಕೊಂಡರೆ ನಮ್ಮನ್ನು ನಾವೇ ಅಧಃಪತನಕ್ಕೆ ಈಡುಮಾಡಿಕೊಂಡಂತೆ.ಮೌಲ್ಯಾಧಾರಿತ,ತತ್ವಾಧಾರಿತ,ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಯಾವುದೇ ಸಂಸ್ಥೆ,ವ್ಯಕ್ತಿಗಳನ್ನು ಬೆಂಬಲಿಸುವುದು,ಪರಮಾಧಿಕಾರ ಚಲಾಯಿಸುವುದು ನಾಗರೀಕ ಹಕ್ಕು ಮತ್ತು ಕರ್ತವ್ಯವೆಂಬುದು ನನ್ನ ಭಾವನೆ.ಆದ್ದರಿಂದ ರಾಜಕೀಯ ನಮಗೇಕೆ ಎಂದು ಮೂಗುಮುರಿದು, ದೂರಸರಿದು ಪ್ರಜಾಪ್ರಭುತ್ವ ಯಾರದೋ ಪಟ್ಟಭದ್ರರ ಪಾಲಾಗಲು ಬಿಡಬೇಡಿ.ನಾಗರೀಕ ಹಕ್ಕು ಮತ್ತು ಕರ್ತವ್ಯಪಾಲನೇ ನಮ್ಮ ಉಸಿರಾಗಿರಲಿ."
ನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕಾಗಿ ಧನ್ಯವಾದಗಳು ಗೆಳೆಯ,
ReplyDeleteರಾಜಕೀಯ ಶುದ್ಧೀಕರಣಕ್ಕೆ ಹೊಸ ಪೀಳಿಗೆಯ ಚಿಂತಕರು, ಕಾರ್ಯಕರ್ತರು, ಮುತ್ಸದಿಗಳು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಚಿಂತನೆ ಸಕಾಲಿಕ ಹಾಗೂ ಅನುಕರಣೀಯ.
ನನ್ನ 2ನೇ ಬ್ಲಾಗು:
www.badari-notes.blogspot.com