"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ ಇರುವಂತದ್ದೇ ಈ ಪ್ರಲಾಪ.ಆದಾಗ್ಯೂ ನಮ್ಮ ಸಾಹಿತ್ಯ ಸಮ್ಮೇಳನ ಸಂಘಟಕರಲ್ಲಿ ಇಂಥ ಲೋಪವಾಗಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುವುದು.ರಾಜಕೀಯ ಯಾವ ಕ್ಷೇತ್ರವನ್ನೂ ಬಿಡದೇ ನುಂಗಿ ಹಾಕಿರುವುದು ವಿಪರ್ಯಾಸ.ನೋಡಿ ಈ ದಿನ ಕೇಂದ್ರ ಸಚಿವರಾದ ಶ್ರೀ ವೀರಪ್ಪ ಮೊಯಿಲಿ ಅವರ ಮಾತನ್ನು ಪ್ರಜಾವಾಣಿಯಲ್ಲಿ ಅವಲೋಕಿಸಿದೆ.ಅದನ್ನು ನೀವೇ ಓದಿ"ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನಗೆ ಆಹ್ವಾನ ನೀಡಿಲ್ಲ.ಖುದ್ದಾಗಿ ಆಹ್ವಾನಿಸುವುದು ಬೇಡ,ಆಹ್ವಾನ ಪತ್ರಿಕೆ ಬಂದಿದ್ದರೂ ಹೋಗದೇ ಉಳಿಯುತ್ತಿರಲಿಲ್ಲ"ಇದಕ್ಕೇನೆನ್ನಬೇಕು ನೀವೇ ಹೇಳಿ!ಆಮಂತ್ರಣ ಕಳಿಸುವ ವ್ಯವಧಾನವೂ ಇಲ್ಲದ ಸಮ್ಮೇಳನ ಸಂಘಟಕರು,ಸಾಹಿತ್ಯ ಪರಿಷತ್ತಿನ ರುವಾರಿಗಳು ಅದೇನು ಮಾಡುತ್ತಿದ್ದರು?ಇಂಥ ಅದೆಷ್ಟು ಮಹನೀಯರಿಗೆ ಆಮಂತ್ರಣ ಕಳಿಸಿಲ್ಲವೋ ಗೊತ್ತಿಲ್ಲ.ಸರ್ಕಾರದ ದುಡ್ಡಿನಿಂದ ನಡೆವ ಜಾತ್ರೆಗೇ ಈ ಗತಿಯಾದರೆ? ಛೇ! ನಿಜಕ್ಕೂ ಬೇಸರ ಬರುತ್ತದೆ.ಕನ್ನಡ ಸರಸ್ವತಿಯ ಮಕ್ಕಳು ರಾಜ್ಯ,ಅಂತರಾಜ್ಯ,ದೇಶ ವಿದೇಶಗಳೆಲೆಲ್ಲ ಹಬ್ಬಿಕೊಂಡಿದ್ದಾರೆ.ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿದ್ದಾರೆ.ಸಮ್ಮೇಳನ ಇಡೀ ನಾಡ ಮಕ್ಕಳದು.ಯಾರದೋ ಸ್ವಂತದ್ದಲ್ಲ.ಕೊನೇ ಪಕ್ಷ ಆಮಂತ್ರಣ ಪತ್ರ ಹೋದರೂ ಸಾಕು ವಾಗ್ದೇವಿಯ ಮಕ್ಕಳು ಪುಳಕಿತರಾಗುವರು.ಅಂತ ಇಚ್ಛಾಶಕ್ತಿ,ನಿಷ್ಪಕ್ಷಪಾತ ಮನೋಭಾವ,ಸಹೃದಯಿ ಚಿಂತನೆ ಅಗತ್ಯ ಅಷ್ಟೇ.ಮುಂದಿನ ದಿನಗಳಲ್ಲಿ ಇಂಥ ಅಚಾತುರ್ಯಗಳಾಗದಿರಲಿ ಎಂಬುದೇ ಆಶಯ."
= ಬನವಾಸಿ ಸೋಮಶೇಖರ್.
= ಬನವಾಸಿ ಸೋಮಶೇಖರ್.
ಅಚಾತುರ್ಯಾಣಂ ಪರಿಷತ್ ಪ್ರತೀತಿ ಗೆಳೆಯ.
ReplyDeleteಅದಿರಲಿ ಕನ್ನಡ ಪಲ್ಲಕಿ ಹೊತ್ತಿರುವ, ಜಗತ್ತಿನಾದ್ಯಂತ ಭಾಷಾ ಜಾಗೃತಿ ಮೂಡಿಸುತ್ತಿರುವ ನನ್ನಂತಹ ನಿಮ್ಮಂತ ಸುಮಾರು ೩೫೦೦ ಕ್ಕೂ ಮಿಕ್ಕ ಬ್ಲಾಗಿಗರೂ. ಫೇಸ್ ಬುಕ್ಕಿನಂತಹ ಸಾಮಾಜಿಕ ತಾಣಗಳಲ್ಲಿ ತಾಯಿ ನುಡಿಯನ್ನು ಪೂಜಿಸುತ್ತಿರುವ ನಮ್ಮ ಬಗ್ಗೆ ಪರಿಷತ್ತಿಗೆ ದಿವ್ಯ ನಿರ್ಲಕ್ಷ್ಯ ಏಕೋ?
ಹೀಗೆ ಅವಗಣನೆಗೆ ಒಳಗಾಗಿ ನೊಂದ ನಮ್ಮವರು "ವಿಶ್ವ ಅಂತರ್ಜಾಲ ಕನ್ನಡ ಸಾಹಿತ್ಯ ಪರಿಷತ್" ಹುಟ್ಟು ಹಾಕಿದರೂ ಆಶ್ಚರ್ಯವಿಲ್ಲ!
ಧನ್ಯವಾದಗಳು ಬದರಿನಾಥ ರವರಿಗೆ. ನೀವು ಆಗಾಗ ನನ್ನ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸುತ್ತಾ ನಮ್ಮನ್ನು ಪ್ರೇರೇಪಿಸುತ್ತಿರುತ್ತೀರಿ.ನಿಮ್ಮ ಬಗ್ಗೆ ನಮಗೆಲ್ಲಾ ಅಪಾರ ಹೆಮ್ಮೆ ಇದೆ.
ReplyDelete